ಆನ್ ಲೈನ್ ಕೋರ್ಸವೇರ್ | ಕಾರ್ಬನ್ ಮತ್ತು ಕಲೆ
ಮ್ಯೂಸಿಯಂಅದ ಹೆಸರು ಮತ್ತು ಸ್ಥಳ: ಪ್ರಶ್ನೆ ಈ ಮ್ಯೂಸಿಯಂನ್ನು ಕಟ್ಟಲು ಯಾವ ಪದಾರ್ಥಗಳನ್ನು ಬಳಸಿದ್ದಾರೆ? ಈ ಪದಾರ್ಥಗಳು ಪಾರಿಸಾರಿಕವಾಗಿ ಸುಸ್ಥಿರ ಎಂದು ನೀವು ಭಾವಿಸುತ್ತೀರಾ? ಮ್ಯೂಸಿಯಂನ ಒಳಗೆ ಹಾಗೂ ಹೊರಗಡೆ ಎಷ್ಟು ಖಾಲಿ ಜಾಗವನ್ನು ನೀವು ಕಂಡಿರಿ? ಈ ಜಾಗವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ? (ವಾಹನ ನಿಲುಗಡೆ, ಗಿಡ-ಮರ ಬೆಳೆಸಲು, ಶಿಲ್ಪಕಲಾಕೃತಿ ನಿಲ್ಲಿಸಲು... ಮುಂತಾದವು) ನೀವು ಮ್ಯೂಸಿಯಂ ಒಳಹೋಗಲು ಪ್ರವೇಶ ಚೀಟಿ ಕೊಳ್ಳಬೇಕಾಯಿತೇ? ನೀವು ಅಲ್ಲಿ ಎಷ್ಟು ಹಣ ಖರ್ಚು ಮಾಡಬೇಕಾಗಿ ಬಂತು? ಖರ್ಚು ಮತ್ತು ತಲುಪುವಿಕೆಯ ಆಧಾರದ ಮೇಲೆ ಹೇಳುವುದಾದರೆ, ಈ ಮ್ಯೂಸಿಯಂನ ಒಳಗೆ ಯಾರು ಪ್ರವೇಶಿಸಬಹುದು? ಮ್ಯೂಸಿಯಂ ಒಳಗಡೆ ಮಾಹಿತಿ ಮತ್ತು ವಿಚಾರಗಳನ್ನು ತಿಳಿಸಲು ಯಾವ ಭಾಷೆ (ಗಳನ್ನು) ಬಳಸಲಾಗಿದೆ? ಅದು ಆ ಪ್ರದೇಶದಲ್ಲಿರುವ ಹೆಚ್ಚಿನ ಜನರು ಮಾತನ್ನಾಡುವ ಭಾಷೆ ಆಗಿದೆಯೇ? ಈ ಮ್ಯೂಸಿಯಂನ ಪ್ರಮುಖವಾದ ಉದ್ದೇಶವೇನು? ಇದು ತನ್ನ ಕಲಾಕೃತಿ ಹಾಗೂ ಪ್ರದರ್ಶನಗಳ ಮೂಲಕ ಯಾವುದಾದರೋ ಪರಿಸರ ಕಾಳಜಿಯನ್ನು ಬಿಂಬಿಸುತ್ತಿದೆಯೇ? ನೀವು ಮ್ಯೂಸಿಯಂಗೆ ಹೋಗಿ ಬರುವ ಮತ್ತು ಅಲ್ಲಿ ಇರುವ ಇಡೀ ಪ್ರಕ್ರಿಯೆಯಲ್ಲಿ ಎಲ್ಲೆಲ್ಲಿ ಕಾರ್ಬನ್ನನ್ನು ಗುರುತಿಸಬಹುದು?
ದಿನಾಂಕ: ಪ್ರತಿಕ್ರಿಯೆ