ನಲ್ಮೆಯ ಕಾನನ ಓದುಗರೇ..
ಮುಂಜಾನೆ ವೇಳೆಯಲ್ಲಿ ಚಿಲಿಪಿಲಿ ಕಲರವ ಕೇಳುವುದು ಎಷ್ಟು ಇಂಪು. ಹಾರುವ ಹಕ್ಕಿಯನ್ನು ಕಂಡು ನಾನು ಕೂಡ ಗಗನದಾಚೆ ಹಾರಬೇಕು ಎಂದೆನಿಸಿದ ಸಂದರ್ಭವೂ ಉಂಟು. ಭೂಮಿ ಮೇಲೆ ಸುಮಾರು 18,000 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳಿವೆ. ಪಕ್ಷಿಗಳು ಪರಾಗಸ್ಪರ್ಶ ಕ್ರಿಯೆಗೆ ಸಹಾಯ ಮಾಡುತ್ತವೆ.ಅವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಾರುವಾಗ ಬೀಜಗಳು ಮತ್ತು ಪೋಷಕಾಂಶಗಳನ್ನು ವರ್ಗಾಯಿಸುತ್ತವೆ. ಕೃಷಿ ಉತ್ಪಾದನೆಯಲ್ಲೂ ಇವು ಮಹತ್ವದ ಪಾತ್ರ ವಹಿಸುತ್ತವೆ. ಜಾನುವಾರುಗಳು ಮತ್ತು ಬೆಳೆಗಳ ಮೇಲೆ ಅನಗತ್ಯ ಕೀಟಗಳನ್ನು ತಿಂದು ಬೆಳೆ ಹಾನಿಯಾಗುವುದರಿಂದ ತಡೆಯುತ್ತವೆ. ಕಾನೂನುಬಾಹಿರ ಸಾಕುಪ್ರಾಣಿ ವ್ಯಾಪಾರ, ರೋಗ ಮತ್ತು ವಾಸಮಾಡಲುಬೇಕಾದ ಸ್ಥಳ ಇಲ್ಲದಿರುವುದರಿಂದ ಅನೇಕ ಪಕ್ಷಿ ಪ್ರಭೇದಗಳು ನಶಿಸುತ್ತಿವೆ. ಪಕ್ಷಿಗಳ ಅಗತ್ಯತೆಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಪ್ರತಿ ಜನವರಿ 5 ರಂದು ರಾಷ್ಟ್ರೀಯ ಪಕ್ಷಿ ದಿನವೆಂದು ಆಚರಿಸಲಾಗುತ್ತದೆ.
ಈ ಮಾಸದ ಲೇಖನಗಳು
ಸಿವಂಗಿ ಪರ್ವ- ರಜತ್ ಕುಮಾರ್
ಕಾಗದದ ಮನೆಯ ಯಜಮಾನ್ತಿ - ಅನುಪಮಾ ಕೆ ಬೆಣಚಿನಮರ್ಡಿ
ಅಲೆಮಾರಿಯ ಅನುಭವಗಳು - ೦೭ - ಮೌನೇಶ ಕನಸುಗಾರ
ಸೂಕ್ಷ್ಮ ಸರಕು ಸಾಗಣೆ - ಜೈ ಕುಮಾರ್ ಆರ್
ಮತ್ತೆ ಬರುವ - ಸಂಗಮನಾಥ ಪಿ ಸಜ್ಜನ
ಪ್ರಕೃತಿ ಬಿಂಬ – ದೀಪಕ್ ಎಲ್ ಎಂ/ದೀಪ್ತಿ ಎನ್